💡 ಸೂಚನೆ: ಈ ಅಕ್ಷರ ದಾಸೋಹ ನಮೂನೆಗಳನ್ನು (1 ರಿಂದ 4) A4 ಪೋರ್ಟ್ರೇಟ್ ಅಳತೆಯಲ್ಲಿ ಪ್ರಿಂಟ್ ಮಾಡಿಕೊಳ್ಳಬಹುದು. ಎಲ್ಲಾ ಖಾಲಿ ಜಾಗಗಳಲ್ಲಿ ನೀವೇ ನೇರವಾಗಿ ಟೈಪ್ ಮಾಡಿ ಎಡಿಟ್ ಮಾಡಬಹುದು. ಡೇಟಾ ಆಟೋ-ಸೇವ್ ಆಗುತ್ತದೆ.
ಕರ್ನಾಟಕ ಸರ್ಕಾರ - ಸಾರ್ವಜನಿಕ ಶಿಕ್ಷಣ ಇಲಾಖೆ

ಅಕ್ಷರ ದಾಸೋಹ ಕಾರ್ಯಕ್ರಮದ ಮೌಲ್ಯಮಾಪನ ನಮೂನೆ-1

ಕ್ರ.ಸಂ ವಸ್ತುಸ್ಥಿತಿ ಹೌದು / ಇಲ್ಲ ಸಲಹೆ / ಮಾರ್ಗದರ್ಶನ
1 ದಾಖಲಾತಿ ಸಂಖ್ಯೆ / ಹಾಜರಾತಿ ಸಂಖ್ಯೆ / ಫಲಾನುಭವಿಗಳ ಸಂಖ್ಯೆ / ಶಾಲೆಗೆ ಹಾಜರಾಗಿ ಬಿಸಿಯೂಟ ಮಾಡದ ಮಕ್ಕಳ ಸಂಖ್ಯೆ ಹಾಗೂ ಕಾರಣ
2 ಅಕ್ಷರ ದಾಸೋಹ ಅಡುಗೆ ಕೋಣೆ ಸುವ್ಯವಸ್ಥಿತವಾಗಿದೆಯೇ? ಗಾಳಿ ಬೆಳಕು ಯಥೇಚ್ಛವಾಗಿದೆಯೇ? ಸ್ವಚ್ಛವಾಗಿ ಸುಣ್ಣಬಣ್ಣ ಮಾಡಿಸಲಾಗಿದೆಯೇ?
3 ಶೇಖರಣಾ ಕೊಠಡಿಯಲ್ಲಿ ಆಹಾರ ಸಾಮಗ್ರಿಗಳನ್ನು ಬೆಂಚು/ಮಣೆ ಮೇಲೆ ಶೇಖರಿಸಿ, ಇಲಿ, ಹೆಗ್ಗಣ, ಕ್ರಿಮಿ ಕೀಟ ಬಾರದಂತೆ ಸುರಕ್ಷಿತವಾಗಿಡಲಾಗಿದೆಯೇ?
4 ಭೇಟಿ ನೀಡಿದ ದಿನದಂದು ಆಹಾರ ಸಾಮಗ್ರಿಗಳನ್ನು ನಿಗದಿತ ಪ್ರಮಾಣದಲ್ಲಿ ಅಡುಗೆಗೆ ಬಳಸಲಾಗಿದೆಯೇ?
5 ಭೇಟಿ ನೀಡಿದ ದಿನದಂದು ತರಕಾರಿಯನ್ನು ನಿಗದಿತ ಪ್ರಮಾಣದಲ್ಲಿ ಅಡುಗೆಗೆ ಬಳಸಲಾಗಿದೆಯೇ?
6 ಆಹಾರ ಸಾಮಗ್ರಿ ಹಾಗೂ ತರಕಾರಿಗಳನ್ನು ಸಂಪೂರ್ಣ ಸ್ವಚ್ಛಗೊಳಿಸಿ, ತೊಳೆದು ನಂತರ ಕತ್ತರಿಸಿ ಅಡುಗೆಗೆ ಉಪಯೋಗಿಸಲಾಗುತ್ತಿದೆಯೇ?
7 ಆಹಾರ ಗುಣಮಟ್ಟದ ಬಗ್ಗೆ ತಮ್ಮ ಹಾಗೂ ಮಕ್ಕಳ ಅಭಿಪ್ರಾಯವೇನು? (ಕಳಪೆ/ಸಾಧಾರಣ/ಉತ್ತಮ/ಅತ್ಯುತ್ತಮ)
8 ಪಾತ್ರೆ ಪರಿಕರಗಳು ಸುಸ್ಥಿತಿಯಲ್ಲಿದೆಯೇ? ಡಿಟರ್ಜೆಂಟ್ ಬಳಸಿ ತೊಳೆದು ಉಪಯೋಗಿಸಲಾಗುತ್ತಿದೆಯೇ?
9 ಗ್ಯಾಸ್ ಸಿಲಿಂಡರ್ ಬಳಸಿ ಅಡುಗೆ ಮಾಡಲಾಗುತ್ತಿದೆಯೇ? ಐಎಸ್‌ಐ ರಬ್ಬರ್ ಸುರಕ್ಷಾ ಟ್ಯೂಬ್ ಅಳವಡಿಸಲಾಗಿದೆಯೇ?
10 ಶಾಲೆಯ ಅಡುಗೆ ಕೇಂದ್ರದಲ್ಲಿ ವಾರದ ಮೆನು ಚಾರ್ಟ್ ಹಾಕಲಾಗಿದೆಯೇ? ಮೆನುವಿನಲ್ಲಿ ವೈವಿಧ್ಯತೆ ಇದೆಯೇ?
11 ಅಡುಗೆಯನ್ನು ಸ್ವಚ್ಛವಾದ ಸ್ಥಳದಲ್ಲಿ ತಯಾರಿಸಲಾಗುತ್ತಿದೆಯೇ?
12 ಸೂಕ್ತವಾದ ಶುದ್ಧವಾದ ಸ್ಥಳದಲ್ಲಿ ಆಹಾರವನ್ನು ಮಕ್ಕಳಿಗೆ ಬಡಿಸಲಾಗುತ್ತಿದೆಯೇ?
13 ಶುದ್ಧವಾದ ಕುಡಿಯುವ ನೀರಿನ ವ್ಯವಸ್ಥೆ ಒದಗಿಸಲಾಗಿದೆಯೇ?
14 ಅಡುಗೆ ಮಾಡಿದ ನಂತರ ತ್ಯಾಜ್ಯ ವಿಲೇವಾರಿ ಸೂಕ್ತವಾಗಿ ಮಾಡಲಾಗುತ್ತಿದೆಯೇ?
15 ಮಕ್ಕಳು ಕ್ರಮಬದ್ಧವಾಗಿ, ಕೈ ತೊಳೆದು, ಶಿಸ್ತಿನಿಂದ ಸಾಲಾಗಿ ಕುಳಿತು ಊಟ ಮಾಡುತ್ತಿದ್ದಾರೆಯೇ?
16 ಅಡುಗೆಯವರಿಗೆ ಸಂಭಾವನೆ ನಿಯಮಿತವಾಗಿ ಬ್ಯಾಂಕ್ ಖಾತೆ ಮೂಲಕ ಸಿಗುತ್ತಿದೆಯೇ?
17 ಅಡುಗೆಯವರು ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಂಡಿದ್ದಾರೆಯೇ? ಕಾಟನ್ ವಸ್ತ್ರ, ಏಪ್ರಾನ್ ಹಾಗೂ ಶಿರವಸ್ತ್ರ ಧರಿಸಿದ್ದಾರೆಯೇ?
18 ಅಕ್ಷರ ದಾಸೋಹ ಕಾರ್ಯಕ್ರಮಕ್ಕೆ ಸಂಬಂಧಿಸಿದ ವಹಿಗಳನ್ನು ಅಂದಂದಿನ ಲೆಕ್ಕ ನಿರ್ವಹಿಸಲಾಗುತ್ತಿದೆಯೇ?
19 ಸುವರ್ಣ ಆರೋಗ್ಯ ಚೈತನ್ಯ ಕಾರ್ಯಕ್ರಮದಡಿ ಮಕ್ಕಳ ಆರೋಗ್ಯ ತಪಾಸಣೆ ಆಗಿದೆಯೇ? ಆರೋಗ್ಯ ಕಾರ್ಡ್ ನಿರ್ವಹಿಸಲಾಗಿದೆಯೇ?
20 ಪೌಷ್ಟಿಕಾಂಶ ಮಾತ್ರೆಗಳ ವಿತರಣೆ ಆಗಿದೆಯೇ? (ವಿಟಮಿನ್-ಎ, ಆಲ್‌ಬೆಂಡೋಜೋಲ್, ಐರನ್ & ಫೋಲಿಕ್ ಆಸಿಡ್)
21 ಶಾಲಾ ಕೈತೋಟದಲ್ಲಿ ತರಕಾರಿ ಬೆಳೆದು ಬಳಸಲಾಗುತ್ತಿದೆಯೇ?
22 ಶಾಲಾ ಗೋಡೆ ಬರಹದಲ್ಲಿ ಸಾರ್ವಜನಿಕರಿಗಾಗಿ ಅಕ್ಷರ ದಾಸೋಹ ಕುರಿತು ಮಾಹಿತಿ ಬರೆಸಲಾಗಿದೆಯೇ?
23 ದಾನಿಗಳು/ಗ್ರಾಮಸ್ಥರ/ಸಮುದಾಯದ ಸಹಭಾಗಿತ್ವ ಹಾಗೂ ಎಸ್.ಡಿ.ಎಂ.ಸಿ / ತಾಯಂದಿರ ಸಮಿತಿ ಸಹಕಾರವಿದೆಯೇ?
ಇವರಿಗೆ,


ಮೌಲ್ಯಮಾಪನ ಮಾಡಿದ ಅಧಿಕಾರಿಗಳ ಸಹಿ
(ಹೆಸರು ಮತ್ತು ಮೊಹರು)
ಕರ್ನಾಟಕ ಸರ್ಕಾರ - ಸಾರ್ವಜನಿಕ ಶಿಕ್ಷಣ ಇಲಾಖೆ

ಅಕ್ಷರ ದಾಸೋಹ ಕಾರ್ಯಕ್ರಮದ ಶಾಲಾ ಸಂದರ್ಶನ ವರದಿ ನಮೂನೆ-2

ಅಂಶಗಳು ಪರಿಶೀಲನಾ ಅಂಶಗಳು ಹೌದು / ಇಲ್ಲ ಸಲಹೆ / ಮಾರ್ಗದರ್ಶನ
01 ಶಾಲಾ ಮಕ್ಕಳ ದಾಖಲಾತಿ ಸಂಖ್ಯೆ, ಹಾಜರಾತಿ ಸಂಖ್ಯೆ ಹಾಗೂ ಫಲಾನುಭವಿಗಳ ಸಂಖ್ಯೆ ಸರಿಯಾಗಿದೆಯೇ?
02 ಅಡುಗೆ ಕೋಣೆ & ಶೇಕರಣಾ ಕೊಠಡಿ ಸುಸಜ್ಜಿತವಾಗಿದೆಯೇ? ಸುಣ್ಣ ಬಣ್ಣ ಮಾಡಿಸಲಾಗಿದೆಯೇ?
03 ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಅಡುಗೆಗೆ ಬಳಸುವ ನೀರಿನ ವ್ಯವಸ್ಥೆ ಶುದ್ಧವಾಗಿದೆಯೇ?
04 ಶೌಚಾಲಯ ಇದೆಯೇ? ಹೆಣ್ಣು ಮತ್ತು ಗಂಡು ಮಕ್ಕಳಿಗೆ ಪ್ರತ್ಯೇಕವಾಗಿದೆಯೇ?
05 ಪಾತ್ರೆ ಪರಿಕರಗಳು ಮಕ್ಕಳ ಸಂಖ್ಯೆಗನುಗುಣವಾಗಿ ಇದೆಯೇ? ಶುದ್ಧವಾಗಿ ಇಟ್ಟು ಬಳಕೆ ಮಾಡಲಾಗುತ್ತಿದೆಯೇ?
06 ಅಡುಗೆಯನ್ನು ಶುಭ್ರತೆಯಿಂದ ಸಿದ್ಧಪಡಿಸಲಾಗುತ್ತಿದೆಯೇ? ಆಹಾರ ಧಾನ್ಯಗಳನ್ನು ಸೂಕ್ತ ಸ್ಥಳದಲ್ಲಿ ನೆಲದಿಂದ ಎತ್ತರದಲ್ಲಿಡಲಾಗಿದೆಯೇ?
07 ಬಿಸಿಯೂಟವನ್ನು ಮಕ್ಕಳಿಗೆ ಸೂಕ್ತ ಸ್ಥಳದಲ್ಲಿ ಬಡಿಸಲಾಗುತ್ತಿದೆಯೇ ಹಾಗೂ ಮಕ್ಕಳು ಸೂಕ್ತ ಸ್ಥಳದಲ್ಲಿ ಊಟ ಮಾಡುತ್ತಿದ್ದಾರೆಯೇ?
08 ಗ್ಯಾಸ್ ಸಿಲಿಂಡರ್ ಬಳಸಿ ಬಿಸಿಯೂಟ ಸಿದ್ಧಪಡಿಸಲಾಗುತ್ತಿದೆಯೇ? ಅಗ್ನಿನಂದಕ ಅಳವಡಿಸಲಾಗಿದೆಯೇ?
09 ಅಡುಗೆ ಸಿಬ್ಬಂದಿಯವರು ಶುಭ್ರತೆ, ಸ್ವಚ್ಛತೆ ಹಾಗೂ ಆರೋಗ್ಯದಿಂದ ಇದ್ದಾರೆಯೇ?
10 ಅಡುಗೆಯವರಿಗೆ ಬ್ಯಾಂಕ್ ಖಾತೆ ಮೂಲಕ ಗೌರವಧನ ನಿಗದಿತ ಸಮಯದಲ್ಲಿ ಸಂದಾಯವಾಗುತ್ತಿದೆಯೇ?
11 ಅಡುಗೆಗೆ ತರಕಾರಿ/ಬೇಳೆ/ಎಣ್ಣೆ ಬಳಕೆ ಸಮರ್ಪಕವಾಗಿದೆಯೇ? ದಾಸ್ತಾನು ಸರಿಯಾಗಿದೆಯೇ?
12 ದಿನದ ಅಡುಗೆ ವಿವರ (ಮೆನು) ಹಾಗೂ ಗುಣಮಟ್ಟ ಉತ್ತಮವಾಗಿದೆಯೇ?
13 ಸುವರ್ಣ ಆರೋಗ್ಯಚೈತನ್ಯ ಕಾರ್ಯಕ್ರಮದಡಿ ವೈದ್ಯಕೀಯ ತಪಾಸಣೆ ಹಾಗೂ ಗಂಭೀರ ಖಾಯಿಲೆಗಳ ಗುರುತಿಸುವಿಕೆ ಆಗಿದೆಯೇ?
14 ಪೌಷ್ಟಿಕಾಂಶದ ಮಾತ್ರೆಗಳನ್ನು (ಆಲ್ಬಂಡಜೋಲ್/ವಿಟಮಿನ್-ಎ/ಐ.ಎಫ್.ಎ) ಮಕ್ಕಳಿಗೆ ನೀಡಲಾಗಿದೆಯೇ?
15 ಶಾಲಾ ಕೈತೋಟ ಬೆಳೆಸಲಾಗಿದೆಯೇ? ತಾಯಂದಿರ ಸಮಿತಿ ರಚಿಸಿ ಸಕ್ರಿಯಗೊಳಿಸಲಾಗಿದೆಯೇ?
16 ಅಕ್ಷರ ದಾಸೋಹಕ್ಕೆ ಸಂಬಂಧಿಸಿದಂತೆ ವಹಿಗಳನ್ನು ಸರಿಯಾಗಿ ನಿರ್ವಹಿಸಲಾಗುತ್ತಿದೆಯೇ?
17 ಮಕ್ಕಳ ದಾಖಲಾತಿ, ಹಾಜರಾತಿ, ಉಳಿಯುವಿಕೆ ಹಾಗೂ ಶೈಕ್ಷಣಿಕ ಪ್ರಗತಿಗೆ ಅಕ್ಷರ ದಾಸೋಹ ಸಹಕಾರಿಯಾಗಿದೆಯೇ?
18 ಸಾರ್ವಜನಿಕರ/ಎಸ್.ಡಿ.ಎಂ.ಸಿ/ಪೋಷಕರ ಅಭಿಪ್ರಾಯ ಪೂರಕವಾಗಿದೆಯೇ ಹಾಗೂ ಭಾವೈಕ್ಯತೆ ಮೂಡಿದೆಯೇ?
19 ಅಕ್ಷರ ದಾಸೋಹ ಕಾರ್ಯಕ್ರಮದ ವಿವರಗಳ ಬಗ್ಗೆ ಗೋಡೆಬರಹ ಬರೆಯಲಾಗಿದೆಯೇ?
20 ಇತರೆ ಸಲಹೆ ಸೂಚನೆಗಳೇನಾದರೂ ಇದ್ದಲ್ಲಿ ವಿವರ ಬರೆಯಿರಿ:
ಇವರಿಗೆ,


ಸಂದರ್ಶನ ಮಾಡಿದ ಅಧಿಕಾರಿಗಳ ಸಹಿ
(ಹೆಸರು ಮತ್ತು ಮೊಹರು)
ಕರ್ನಾಟಕ ಸರ್ಕಾರ - ಸಾರ್ವಜನಿಕ ಶಿಕ್ಷಣ ಇಲಾಖೆ

ಅಕ್ಷರ ದಾಸೋಹ ಕಾರ್ಯಕ್ರಮದ ಶಾಲಾ ತಪಾಸಣಾ ವರದಿ ನಮೂನೆ-3

1. ಮುಖ್ಯ ಶಿಕ್ಷಕರ ಹೆಸರು:
2. ಮುಖ್ಯ ಅಡುಗೆಯವರ / ಸಹಾಯಕರ ಹೆಸರು:
3. ಮಕ್ಕಳ ಸಂಖ್ಯೆ : ದಾಖಲಾತಿ: | ಹಾಜರಾತಿ: | ಫಲಾನುಭವಿಗಳು:
4. ದಾಖಲಾತಿ/ಹಾಜರಾತಿ/ಫಲಾನುಭವಿಗಳಿಗೆ ವ್ಯತ್ಯಾಸಗಳಿದ್ದಲ್ಲಿ ಕಾರಣ:
5. ಆಹಾರ ಸಾಮಗ್ರಿಗಳ ವಿವರ (ಕಿ.ಗ್ರಾಂಗಳಲ್ಲಿ):
ವಿವರ ಅಕ್ಕಿ ಬೇಳೆ ಎಣ್ಣೆ ಸಾಂಬಾರು ದಿನಸಿ ತರಕಾರಿ ಉಪ್ಪು
ತಪಾಸಣಾ ದಿನದಂದು ಬಳಕೆ ಮಾಡಿದ ವಿವರ
ಉಳಿಕೆ ದಾಸ್ತಾನು
6. ಆಹಾರ ಸಾಮಗ್ರಿಗಳ ದಾಸ್ತಾನು/ಬಳಕೆ/ವಹಿ ನಿರ್ವಹಣೆ ಬಗ್ಗೆ ಆಕ್ಷೇಪಣೆಗಳಿವೆಯೆ?
7. ಆಹಾರ ಸಾಮಗ್ರಿಗಳು ಸಮಯಕ್ಕೆ ಸರಿಯಾಗಿ/ಮುಂಚಿತವಾಗಿ ಸರಬರಾಜಾಗಿವೆಯೆ?
8. ವಿಶೇಷ ಪೌಷ್ಟಿಕಾಂಶ ಮಾತ್ರೆಗಳ ದಾಸ್ತಾನು ಮತ್ತು ವಿತರಣೆ ವಿವರ:
ವಿವರ ಅಲ್ಬಂಡಜೋಲ್ ವಿಟಮಿನ್-ಎ ಐರನ್ ಫೋಲಿಕ್ ಆಸಿಡ್
ಕಳೆದ ಸಾಲಿನ ಉಳಿಕೆ
ಪ್ರಸ್ತುತ ಸಾಲಿನಲ್ಲಿ ಸ್ವೀಕೃತಿ
ಒಟ್ಟು
ವಿತರಣೆ
ಬ್ಯಾಚ್ ಸಂಖ್ಯೆ / ತಯಾರಿಕಾ ದಿನಾಂಕ / ಅವಧಿ ಮುಕ್ತಾಯ ದಿನಾಂಕ:
ಕ್ರ.ಸಂ ತಪಾಸಣಾ ಅಂಶಗಳು ವಸ್ತುಸ್ಥಿತಿ / ವಿವರಣೆ
9 ಅಡುಗೆ ತಯಾರಿಕಾ ವೆಚ್ಚವು ಮಕ್ಕಳ ಸಂಖ್ಯೆಗಳಿಗನುಗುಣವಾಗಿ ಮುಂಚಿತವಾಗಿ ಬಿಡುಗಡೆಯಾಗುತ್ತಿದೆಯೇ? ಬಳಕೆ ವಿವರಣೆ:
10 ವೆಚ್ಚಗಳಿಗೆ ಸಂಬಂಧಿಸಿದಂತೆ ದಾಖಲೆಗಳ ನಿರ್ವಹಣೆ ಸರಿಯಾಗಿದೆಯೇ?
11 ಕಳೆದ ಬಾರಿಯ ತಪಾಸಣೆ ಸಂದರ್ಭದಲ್ಲಿ ನೀಡಿದ ಸಲಹೆಗಳ ಬಗ್ಗೆ ಕ್ರಮ ಕೈಗೊಳ್ಳಲಾಗಿದೆಯೆ?
12 ಕುಡಿಯುವ ನೀರಿನ ವ್ಯವಸ್ಥೆ, ಅಡುಗೆ ಮನೆ ಸ್ವಚ್ಛತೆ ಹಾಗೂ ಯಥೇಚ್ಛ ಗಾಳಿ ಬೆಳಕು ಇದೆಯೇ?
13 ಸುಣ್ಣ ಬಣ್ಣ ಬಳಿಸಲಾಗಿದೆಯೇ ಹಾಗೂ ತರಕಾರಿಗಳನ್ನು ನಿಗದಿತ ಪ್ರಮಾಣದಲ್ಲಿ ಬಳಸಲಾಗುತ್ತಿದೆಯೇ?
14 ಅಡುಗೆ ಪಾತ್ರೆ ಪರಿಕರಗಳು ಸುಸ್ಥಿತಿಯಲ್ಲಿದೆಯೇ? ಅಡುಗೆ ಅನಿಲ ಬಳಸಿ ಆಹಾರ ಸಿದ್ಧಪಡಿಸಲಾಗುತ್ತಿದೆಯೇ?
15 ಸರಬರಾಜಾಗುತ್ತಿರುವ ಆಹಾರ ಧಾನ್ಯಗಳ ಬಗ್ಗೆ ಅಡುಗೆಯವರ ಅಭಿಪ್ರಾಯ ಹಾಗೂ ದೂರುಗಳೇನಾದರೂ ಇದೆಯೆ?
16 ಅಗ್ನಿ ನಂದಕ ಅಳವಡಿಸಲಾಗಿದೆಯೇ ಹಾಗೂ ಬಳಕೆ ಬಗ್ಗೆ ಸಿಬ್ಬಂದಿಗೆ ತರಬೇತಿ ಆಗಿದೆಯೇ?
17 ಸುವರ್ಣ ಆರೋಗ್ಯಚೈತನ್ಯ ಕಾರ್ಯಕ್ರಮದಡಿ ವೈದ್ಯಕೀಯ ತಪಾಸಣೆ, ಗಂಭೀರ ಖಾಯಿಲೆಗಳ ಗುರುತಿಸುವಿಕೆ ಹಾಗೂ ಆರೋಗ್ಯ ಕಾರ್ಡ್ ನಿರ್ವಹಣೆ?
18 ಶಾಲಾ ಕೈತೋಟ ಬೆಳಸಲಾಗಿದೆಯೆ? ತರಕಾರಿಗಳನ್ನು ಅಕ್ಷರ ದಾಸೋಹಕ್ಕೆ ಬಳಸಲಾಗುತ್ತಿದೆಯೇ?
19 ತಾಯಂದಿರ ಸಮಿತಿ ಹಾಗೂ ಗ್ರಾಹಕರ ಕ್ಲಬ್ ರಚಿಸಿ ಸಕ್ರಿಯಗೊಳಿಸಲಾಗಿದೆಯೆ?
20 ಅಕ್ಷರ ದಾಸೋಹಕ್ಕೆ ಸಂಬಂಧಿಸಿದಂತೆ ಎಲ್ಲಾ ವಹಿಗಳನ್ನು ಸಮರ್ಪಕವಾಗಿ ನಿರ್ವಹಿಸಲಾಗಿದೆಯೆ?
21 ಮಕ್ಕಳ ದಾಖಲಾತಿ, ಹಾಜರಾತಿ, ಉಳಿಯುವಿಕೆ ಹಾಗೂ ಶೈಕ್ಷಣಿಕ ಪ್ರಗತಿಗೆ ಅಕ್ಷರ ದಾಸೋಹ ಸಹಕಾರಿಯಾಗಿದೆಯೇ?
22 ಸಾರ್ವಜನಿಕರ/ಎಸ್.ಡಿ.ಎಂ.ಸಿ/ಪೋಷಕರ ಅಭಿಪ್ರಾಯ ಪೂರಕವಾಗಿದೆಯೇ ಹಾಗೂ ಭಾವೈಕ್ಯತೆ ಮೂಡಿದೆಯೆ?
23 ಅಕ್ಷರ ದಾಸೋಹ ಕಾರ್ಯಕ್ರಮದ ವಿವರಗಳ ಬಗ್ಗೆ ಗೋಡೆಬರಹ ಬರೆಯಲಾಗಿದೆಯೆ? ದೇಣಿಗೆ ಪಡೆದಿದ್ದಲ್ಲಿ ವಿವರ?
24 ತಪಾಸಣಾ ದಿನದಂದು ತಯಾರಿಸಿದ ಆಹಾರದ ವಿವರ ಹಾಗೂ ಗುಣಮಟ್ಟ ಹೇಗಿದೆ? ಇತರೆ ಸಲಹೆಗಳು:
ಒಟ್ಟಾರೆ ಅಭಿಪ್ರಾಯ:
ಇವರಿಗೆ,


ತಪಾಸಣೆ ಮಾಡಿದ ಅಧಿಕಾರಿಗಳ ಸಹಿ
(ಹೆಸರು ಮತ್ತು ಮೊಹರು)
ಕರ್ನಾಟಕ ಸರ್ಕಾರ - ಸಾರ್ವಜನಿಕ ಶಿಕ್ಷಣ ಇಲಾಖೆ

ಅಕ್ಷರ ದಾಸೋಹ ಕಾರ್ಯಕ್ರಮದಡಿ ಬಿಸಿಯೂಟ ಸರಬರಾಜು ಮಾಡುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಅಡುಗೆ ಕೇಂದ್ರ ತಪಾಸಣೆ ನಮೂನೆ-4

ಕ್ರ.ಸಂ ವಸ್ತು ಸ್ಥಿತಿ ತಪಾಸಣೆ ಅಂಶಗಳು ಹೌದು / ಇಲ್ಲ ಸಲಹೆ / ಮಾರ್ಗದರ್ಶನ
01 ಸ್ವಯಂ ಸೇವಾ ಸಂಸ್ಥೆಯ ಹೆಸರು ಮತ್ತು ಅಡುಗೆ ಕೇಂದ್ರ ಇರುವ ಸ್ಥಳದ ವಿವರ:
02 ಸುಸಜ್ಜಿತವಾದ ಅಡುಗೆ ಕೋಣೆ ಹಾಗೂ ಸುಣ್ಣ ಬಣ್ಣ ಬಳಸಿ ಸ್ವಚ್ಛವಾಗಿಡಲಾಗಿದೆಯೇ?
03 ಪಾತ್ರೆ ಪರಿಕರಗಳು ಸ್ವಚ್ಛವಾಗಿವೆಯೆ? ಡಿಟರ್ಜೆಂಟ್ ಬಳಸಿ ಶುದ್ಧಗೊಳಿಸಲಾಗಿದೆಯೆ?
04 ಅಡುಗೆ ಕೇಂದ್ರದಲ್ಲಿ ಸ್ವಚ್ಛತೆ ಕಾಪಾಡಲಾಗಿದೆಯೆ? ಆಹಾರ ವಿತರಿಸಲು ಸಾಗಾಣಿಕೆಗೆ ಬಳಸುವ ವಾಹನ/ಸಿಬ್ಬಂದಿ ಸುರಕ್ಷಿತವಾಗಿದ್ದಾರೆಯೇ?
05 ಅಡುಗೆ ಕೇಂದ್ರದಿಂದ ಶಾಲೆಗೆ ಇರುವ ದೂರ (ಕಿ.ಮೀ.) ಹಾಗೂ ಮೆನು ಚಾರ್ಟ್ ಹಾಕಲಾಗಿದೆಯೆ?
06 ಅಡುಗೆ ಕೇಂದ್ರದಲ್ಲಿ ಫಲಾನುಭವಿ ಮಕ್ಕಳ ವಿವರ ಹಾಕಲಾಗಿದೆಯೆ ಹಾಗೂ ಆಹಾರ ಗುಣಮಟ್ಟ ಹೇಗಿದೆ?
07 ನಿಗದಿತ ಪ್ರಮಾಣದಲ್ಲಿ ಆಹಾರ ಸಾಮಗ್ರಿ ಹಾಗೂ ತರಕಾರಿಗಳನ್ನು ಶುದ್ಧಗೊಳಿಸಿ ಅಡುಗೆಗೆ ಬಳಸುತ್ತಿದ್ದಾರೆಯೆ?
08 ತ್ಯಾಜ್ಯ ವಿಲೇವಾರಿ ಸೂಕ್ತವಾಗಿ ಮಾಡಲಾಗುತ್ತಿದೆಯೆ ಹಾಗೂ ಅಡುಗೆ ಕೇಂದ್ರದ ಸುತ್ತಮುತ್ತ ವಾತಾವರಣ ಸ್ವಚ್ಛವಾಗಿದೆಯೆ?
09 ಅಡುಗೆ ಸಿಬ್ಬಂದಿಯವರು ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಂಡು ಅಡುಗೆ ಮಾಡುತ್ತಿದ್ದಾರೆಯೆ?
10 ಎನ್.ಜಿ.ಒ. ಅವರು ಸಕಾಲಕ್ಕೆ ಸರಿಯಾಗಿ ನಿಯಮಿತವಾಗಿ ಮಕ್ಕಳಿಗೆ ಆಹಾರ ವಿತರಿಸುತ್ತಿದ್ದಾರೆಯೆ? ವಾರಕ್ಕೊಮ್ಮೆ ಸಿಹಿ ನೀಡಲಾಗುತ್ತಿದೆಯೆ?
ಇವರಿಗೆ,


ತಪಾಸಣೆ ಕೈಗೊಂಡ ಅಧಿಕಾರಿಗಳ ಸಹಿ
(ಹೆಸರು ಮತ್ತು ಮೊಹರು)

ರಚನೆ: ಮನೋಹರ್ ಆರ್‌ ಕೆ.ಜಿ.ಎಫ್
🌐 School Resource Centre – Click Here to Visit