💡 ಸೂಚನೆ: ಈ ನಮೂನೆಗಳನ್ನು (IV ರಿಂದ IX) A4 ಪೋರ್ಟ್ರೇಟ್ ಅಳತೆಯಲ್ಲಿ ಪ್ರಿಂಟ್ ಮಾಡಿಕೊಳ್ಳಬಹುದು. ಎಲ್ಲಾ ಖಾಲಿ ಜಾಗಗಳಲ್ಲಿ ನೀವೇ ನೇರವಾಗಿ ಟೈಪ್ ಮಾಡಿ ಎಡಿಟ್ ಮಾಡಬಹುದು. ಡೇಟಾ ಆಟೋ-ಸೇವ್ ಆಗುತ್ತದೆ.
ಕರ್ನಾಟಕ ಸರ್ಕಾರ

ನಮೂನೆ - IV

(ನಿಯಮ 6ಬಿ(1) ನೋಡಿ)
ಶಾಲೆಯಿಂದ ಮಗುವಿನ ಗೈರುಹಾಜರಿಯನ್ನು ವರದಿಮಾಡುವ ಮಾದರಿ
ಇವರಿಂದ:
ಮುಖ್ಯ ಶಿಕ್ಷಕರು / ಶಿಕ್ಷಕರು,
ಶಾಲೆ: ಸ್ಥಳ:
ಸಮುದಾಯ, ಬ್ಲಾಕ್: ಜಿಲ್ಲೆ:

ಇವರಿಗೆ:
ಹಾಜರಾತಿ ಅಧಿಕಾರಿ,
ಸಮುದಾಯ, ಬ್ಲಾಕ್: ಜಿಲ್ಲೆ:

ಮಾನ್ಯರೆ,
ವಿಷಯ: ಶ್ರೀ/ಕುಮಾರಿ ಅವರ ಗೈರುಹಾಜರಾತಿ ಬಗ್ಗೆ.

ಈ ಶಾಲೆಯಲ್ಲಿ ತರಗತಿಯಲ್ಲಿ ಓದುತ್ತಿರುವ ಎಂಬ ಮಗುವು, ದಿನಾಂಕ: ರಿಂದ ವರೆಗೆ ತರಗತಿ ಶಿಕ್ಷಕರು/ಮುಖ್ಯಶಿಕ್ಷಕರ ಪೂರ್ವಾನುಮತಿ ಪಡೆಯದೆ ಗೈರುಹಾಜರಾಗಿದೆ ಎಂದು ತಿಳಿದುಬಂದಿದೆ. ಸಹಿಮಾಡಿರುವವರು ಇತರ ಮಕ್ಕಳನ್ನು ವಿಚಾರಿಸಿ ಮತ್ತು ಪೋಷಕರನ್ನು ವಿಚಾರಿಸಿ ಈ ಮಗುವಿನ ಗೈರುಹಾಜರಿಗೆ ಕಾರಣಗಳನ್ನು ತಿಳಿಯಲು ಯತ್ನಿಸಿರುತ್ತಾರೆ. ಆದರೆ ಕೆಳಕಂಡ ಯಾವುದೇ ಕಾರಣಗಳಿಗೆ ಮಗುವು ಗೈರುಹಾಜರಾಗಿಲ್ಲ ಎಂದು ತಿಳಿದುಬಂದಿದೆ:

1. ಮಗುವನ್ನು ಸರ್ಕಾರಿ ಶಾಲೆಗೆ ಅಥವಾ ಅಧಿಕೃತ ಖಾಸಗಿ ನೆರವಿನ/ನೆರವುರಹಿತ ಶಾಲೆಗೆ ಸೇರಿಸಲಾಗಿದೆ.
2. ರಾಜ್ಯಸರ್ಕಾರವು ನಡೆಸುತ್ತಿರುವ ಇತರ ಅಧಿಕೃತ ವಿದ್ಯಾಸಂಸ್ಥೆಯಲ್ಲಿ ಮಗುವು ಶಿಕ್ಷಣ ಪಡೆಯುತ್ತಿದೆ.
3. ಪ್ರಕೃತಿ ವಿಕೋಪ, ಬಂದ್ ಅಥವಾ ಸಾರ್ವಜನಿಕ ಗಲಭೆ ಇತ್ಯಾದಿ ಕಾರಣಗಳಿಂದ ಗೈರುಹಾಜರಾಗಿದೆ.
4. ಅರ್ಹ ಅಧಿಕಾರಿಗಳು ನಿರ್ದಿಷ್ಟ ಅವಧಿಗೆ ಮಗುವಿಗೆ ತಾತ್ಕಾಲಿಕ ರಜೆಯನ್ನು ನೀಡಿದ್ದಾರೆ.

ಹಾಗಾಗಿ, ಮಗುವಿನ ಗೈರುಹಾಜರಿಯನ್ನು ಕಾರಣವಿಲ್ಲದ ಗೈರುಹಾಜರಾತಿಯೆಂದು ಪರಿಗಣಿಸಿ, ನಿಯಮ 6ಎ ಅಡಿಯಲ್ಲಿ ಹಾಜರಾತಿ ಸೂಚನೆಯನ್ನು ನೀಡಲು ಮುಂದಿನ ಕ್ರಮ ಕೈಗೊಳ್ಳಬಹುದು.

ದಿನಾಂಕ:
ನಿಮ್ಮ ವಿಶ್ವಾಸಿ,


ಮುಖ್ಯ ಶಿಕ್ಷಕರು / ಶಿಕ್ಷಕರು
ಕರ್ನಾಟಕ ಸರ್ಕಾರ

ನಮೂನೆ - V

(ನಿಯಮ 6ಬಿ(2) ನೋಡಿ) - ಹಾಜರಾತಿ ಸೂಚನೆ
ದಿನಾಂಕ:
ಇವರಿಂದ: ಹಾಜರಾತಿ ಅಧಿಕಾರಿ, ಬ್ಲಾಕ್: , ಜಿಲ್ಲೆ:
ಇವರಿಗೆ: ಶ್ರೀ/ಶ್ರೀಮತಿ (ಪೋಷಕರು)
ಉಲ್ಲೇಖ: ದಿನಾಂಕ ದ ಮುಖ್ಯಶಿಕ್ಷಕರ ವರದಿ.

ಮಾನ್ಯರೆ, ನಲ್ಲಿರುವ ಶಾಲೆಯಲ್ಲಿ ಓದುತ್ತಿರುವ ನಿಮ್ಮ ಮಗುವು ದಿನಾಂಕ ರಿಂದ ವರೆಗೆ ಅಧಿಕಾರಿಗಳ ಪೂರ್ವಾನುಮತಿ ಪಡೆಯದೆ ಗೈರು ಹಾಜರಾಗಿರುತ್ತದೆ ಎಂದು ಮುಖ್ಯಶಿಕ್ಷಕರು ವರದಿ ಮಾಡಿರುತ್ತಾರೆ. ಈ ಅವಧಿಯಲ್ಲಿ ನಿಮ್ಮ ಮಗುವು ಶಾಲೆಗೆ ಹಾಜರಾಗದಿರಲು ಕಾರಣಗಳನ್ನು ತಿಳಿಸಲು ಮತ್ತು ಮುಂದಿನ ಕೆಲಸದ ದಿನದಿಂದ ನಿಮ್ಮ ಮಗುವನ್ನು ಶಾಲೆಗೆ ನಿಯಮಿತವಾಗಿ ಕಳಿಸಲು ಈ ಮೂಲಕ ನಿರ್ದೇಶನ ನೀಡಲಾಗುತ್ತಿದೆ.
ಹಾಜರಾತಿ ಅಧಿಕಾರಿ

ನಮೂನೆ - VI

(ನಿಯಮ 6ಬಿ(2) ನೋಡಿ) - ಹಾಜರಾತಿ ಸೂಚನೆಗೆ ಸ್ವೀಕೃತಿ
ಇವರಿಂದ: ತಂದೆ/ತಾಯಿ/ಪೋಷಕರು, ಗ್ರಾಮ/ಸ್ಥಳ:
ಇವರಿಗೆ: ಹಾಜರಾತಿ ಅಧಿಕಾರಿ, ಬ್ಲಾಕ್:

ಮಾನ್ಯರೆ, ಶಾಲೆಯಲ್ಲಿ ತರಗತಿಯಲ್ಲಿ ಓದುತ್ತಿರುವ, ದಿನಾಂಕ: ರಂದು ಹುಟ್ಟಿದ ಹೆಸರಿನ ಹುಡುಗ/ಹುಡುಗಿಯ ತಂದೆ/ತಾಯಿ/ಪೋಷಕರಾದ ಕೆಳಗೆ ಸಹಿ ಮಾಡಿರುವ ನಾನು ದಿನಾಂಕ: ರಂದು, ಸೂಚನಾ ಸಂಖ್ಯೆ: ರ ಹಾಜರಾತಿ ಸೂಚನೆಯನ್ನು ಸ್ವೀಕರಿಸಿದ್ದೇನೆ ಎಂದು ಈ ಮೂಲಕ ತಿಳಿಸುತ್ತಿದ್ದೇನೆ.

ಸ್ಥಳ: | ದಿನಾಂಕ:
ತಂದೆ/ತಾಯಿ/ಪೋಷಕರ ಸಹಿ
ಕರ್ನಾಟಕ ಸರ್ಕಾರ

ನಮೂನೆ - VII

(ನಿಯಮ 6ಡಿ(2) ನೋಡಿ) - ಹಾಜರಾತಿ ಆದೇಶ
ಇವರಿಂದ: ಹಾಜರಾತಿ ಅಧಿಕಾರಿ
ಇವರಿಗೆ: ಶ್ರೀ/ಶ್ರೀಮತಿ

ಮಾನ್ಯರೆ, ನಿಮಗೆ ಕಳುಹಿಸಲಾದ ದಿನಾಂಕ: ರ ಸಂ.: ರ ಹಾಜರಾತಿ ಸೂಚನೆಯ ಮೂಲಕ ನಿಮ್ಮ ಮಗ/ಮಗಳು ಶಾಲೆಗೆ ನಿಯಮಿತವಾಗಿ ಹಾಜರಾಗುವಂತೆ ತಿಳಿಸಲಾಗಿತ್ತು. ಎಸ್‌ಡಿಎಮ್‌ಸಿ/ಗ್ರಾ.ಪಂ./ಸ್ಥಳೀಯ ಪ್ರಾಧಿಕಾರದ ಪ್ರತಿನಿಧಿಗಳ ಸಮ್ಮುಖದಲ್ಲಿ ದಿನಾಂಕ: ರಂದು ಸಮಾಲೋಚನೆ ನಡೆಸಿದ್ದರೂ ನೀವು ವಿಫಲರಾಗಿದ್ದೀರಿ. ಆದ್ದರಿಂದ ನೀವು, ನಿಮ್ಮ ಮಗುವಿನೊಂದಿಗೆ ದಿನಾಂಕ: ರಂದು ಸ್ಥಳ: ದಲ್ಲಿರುವ ಶಿಶು ಕಲ್ಯಾಣ ಸಮಿತಿಯೆದುರು ಹಾಜರಾಗಬೇಕೆಂದು ನಿರ್ದೇಶಿಸಲಾಗಿದೆ.
ಹಾಜರಾತಿ ಅಧಿಕಾರಿ

ನಮೂನೆ - VIII

(ನಿಯಮ 6ಡಿ(2) ನೋಡಿ) - ಹಾಜರಾತಿ ಆದೇಶದ ಸ್ವೀಕೃತಿ
ಇವರಿಂದ: ಪೋಷಕರು, ವಿಳಾಸ:
ಇವರಿಗೆ: ಹಾಜರಾತಿ ಅಧಿಕಾರಿ

ಮಾನ್ಯರೆ, ಶಾಲೆಯಲ್ಲಿ ಓದುತ್ತಿರುವ ಮಗುವಿನ ತಂದೆ/ತಾಯಿ/ಪೋಷಕರಾದ ನಾನು ದಿನಾಂಕ: ರ ಹಾಜರಾತಿ ಆದೇಶವನ್ನು ಸ್ವೀಕರಿಸಿದ್ದೇನೆ ಎಂದು ತಿಳಿಸುತ್ತಿದ್ದೇನೆ.

ಸ್ಥಳ: | ದಿನಾಂಕ:
ತಂದೆ/ತಾಯಿ/ಪೋಷಕರ ಸಹಿ
ಕರ್ನಾಟಕ ಸರ್ಕಾರ

ನಮೂನೆ - IX

(ನಿಯಮ 6ಡಿ(8) ನೋಡಿ) - ಸಾಂಸ್ಥಿಕ ನಿಯೋಜನೆಗೆ ಆದೇಶ
ಆದೇಶ ಸಂ.:
ಸಂದರ್ಭ ಸಂ.:
ಮಗುವಿನ ಭಾವಚಿತ್ರ ಇಲ್ಲಿ ಅಂಟಿಸಿ
1. ಮಗುವಿನ ಹೆಸರು (ಪೂರ್ಣ ಹೆಸರು):

ಇವರಿಗೆ: ಪ್ರಭಾರ ಅಧಿಕಾರಿಗಳಿಗೆ, ಸರ್ಕಾರಿ/ಅನುದಾನಿತ ವಸತಿ ಕೇಂದ್ರ/ನಿವಾಸ ಶಾಲೆ:

ಕರ್ನಾಟಕ ಮಕ್ಕಳಿಗೆ ಉಚಿತ ಹಾಗು ಕಡ್ಡಾಯ ಶಿಕ್ಷಣ (ತಿದ್ದುಪಡಿ) ನಿಯಮಗಳು 2013 ರ ಅನುಚ್ಛೇದ 6ಡಿ ನಿಯಮಗಳಡಿ ಮೇಲಿನ ಮಗುವಿಗೆ ಆರೈಕೆ ಹಾಗು ರಕ್ಷಣೆಯ ಅಗತ್ಯವಿದೆ. ಪುನರ್ವಸತಿ ಹಾಗು ಸಮೀಕರಣದ ಉದ್ದೇಶಕ್ಕಾಗಿ, ಮೇಲೆ ತಿಳಿಸಲಾಗಿರುವ ಮಗುವನ್ನು ಅವಧಿಯವರೆಗೆ ನಿಮ್ಮ ಮೇಲುಸ್ತುವಾರಿಯಡಿ ಇರಿಸಬೇಕೆಂದು ಈ ಮೂಲಕ ಆದೇಶಿಸಲಾಗುತ್ತಿದೆ.

ಮಗುವನ್ನು ನಿಮ್ಮ ಸುಪರ್ದಿಗೆ ತೆಗೆದುಕೊಳ್ಳಲು ಮತ್ತು ಅಗತ್ಯವಾದ ಅಧಿಕಾರವನ್ನು ನೀಡಲು ಆದೇಶಿಸಲಾಗಿದೆ. ಮಗುವಿಗೆ ಸಂಬಂಧಪಟ್ಟ ಎಲ್ಲಾ ದಾಖಲೆಗಳು ಮತ್ತು ವೈಯಕ್ತಿಕ ವಸ್ತುಗಳನ್ನು ಒಪ್ಪಿಸಲಾಗುತ್ತದೆ.

ಸ್ಥಳ: | ದಿನಾಂಕ:
ಅಧ್ಯಕ್ಷರು, ಶಿಶು ಕಲ್ಯಾಣ ಸಮಿತಿ
ಇವರುಗಳಿಗೆ ಪ್ರತಿ:
* ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು
* ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕ, ಬೆಂಗಳೂರು
* ಸಂಬಂಧಪಟ್ಟ ಜಿಲ್ಲೆಯ ಉಪನಿರ್ದೇಶಕರು (ಆಡಳಿತ / ಅಭಿವೃದ್ಧಿ)
* ಸಂಬಂಧಪಟ್ಟ ಬ್ಲಾಕ್ ಶಿಕ್ಷಣಾಧಿಕಾರಿಗಳು

ರಚನೆ: ಮನೋಹರ್ ಆರ್‌ ಕೆ.ಜಿ.ಎಫ್
🌐 School Resource Centre – Click Here to Visit